ನಾವು ಕೆಲ ಪರದೇಶಗಳಿಂದ (ಬ್ರಿಟಿಷರು, ಪೋರ್ಚುಗೀಸರು, ಫ್ರೆಂಚರು, ಡಚ್ಚರು) ಒಂದುಸಲ ಸ್ವಾತಂತ್ರ್ಯವನ್ನು ಪಡೆದೆವು ಎಂದ ಮಾತ್ರಕ್ಕೆ ಆ ದೇಶಗಳು (ಅಥವಾಇತರದೇಶಗಳು) ಮತ್ತೇ ನಮ್ಮ ಮೇಲೆ ದಾಳಿ ಮಾಡುವುದೇ ಇಲ್ಲವೆಂದು ಅರ್ಥವಲ್ಲ.
ನಮ್ಮ ರಾಷ್ಟ್ರ ಸುಭದ್ರವಾಗಿ ಇರುವವರೆಗೆ ಮಾತ್ರ ನಾವು, ನಮ್ಮ ಭಾಷೆಗಳು, ನಮ್ಮ ಸಂಸ್ಕೃತಿ, ನಮ್ಮ ಗುರುತಾಗಿರುವುದೆಲ್ಲವೂ ಕ್ಷೇಮದಿಂದಿರಲು ಸಾಧ್ಯ.
ನಮ್ಮ ಸೈನಿಕರ ಜೀವಗಳು ಇಡೀ ದೇಶಕ್ಕೇ ಅಮೂಲ್ಯವಾಗಿವೆ.
ದೇಶದ ನೆಲ-ಜಲ, ಜನ, ಸಂಸ್ಕೃತಿಗಳನ್ನು ಭದ್ರವಾಗಿರುವಂತೆ ನೋಡಿಕೊಳ್ಳುವ ಸರ್ಕಾರವನ್ನು ಆಯ್ಕೆಮಾಡುವುದು ಅತೀ ಮುಖ್ಯ. ನಮ್ಮ ಸೈನಿಕರ ಜೀವಗಳಿಗೆ ಬೆಲೆಕೊಡುವ ಮತ್ತು ಆ ಜೀವಗಳನ್ನು ಗೌರವಿಸುವ ಸರ್ಕಾರವನ್ನೇ ಆಯ್ಕೆಮಾಡಿ.